== ಚುನಾವಣಾ ವಿವರಗಳು == ಸ್ವತಂತ್ರ ಭಾರತದಲ್ಲಿ ಮೊತ್ತಮೊದಲ ಲೋಕಸಭಾ ಚುನಾವಣೆ ನಡೆದದ್ದು 25 ಅಕ್ಟೋಬರ್ 1951ರಿಂದ 21 ಫೆಬ್ರವರಿ 1952ರವರೆಗೆ. ದೇಶದ ಉದ್ದಗಲಕ್ಕೂ ಇದ್ದ 489 ಕ್ಷೇತ್ರಗಳಲ್ಲಿ 1949 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂದಿನ ಭಾರತದ ಜನಸಂಖ್ಯೆಯ 360 ಮಿಲಿಯನ್ ಮಂದಿಯ ಪೈಕಿ 173 ಮಿಲಿಯನ್ ಮಂದಿಗೆ ಮತದಾನದ ಹಕ್ಕು ಲಭಿಸಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು 489 ಲೋಕಸಭಾ ಕ್ಷೇತ್ರಗಳ ಪೈಕಿ 364 ಕ್ಷೇತ್ರಗಳನ್ನು ಗೆದ್ದು ಅಭೂತಪೂರ್ವ ಗೆಲುವು ಸಾಧಿಸಿತ್ತು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಭಾರತದ ಮೊದಲ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಜವಾಹರಲಾಲ್ ನೆಹರು ಪಾತ್ರರಾದರು. === ಆಯ್ಕೆಯಾದ ಸಂಸದರ ಪಟ್ಟಿ === == ಉಲ್ಲೇಖಗಳು == == ಕೊಂಡಿಗಳು ==